ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಚುನಾವಣೆಯ ಬಳಿಕ ಸಾಮೂಹಿಕ ವರ್ಗಾವಣೆ - ಸರ್ಕಾರದ ತೀರ್ಮಾನ

ಬೆಂಗಳೂರು: ಚುನಾವಣೆಯ ಬಳಿಕ ಸಾಮೂಹಿಕ ವರ್ಗಾವಣೆ - ಸರ್ಕಾರದ ತೀರ್ಮಾನ

Tue, 13 Apr 2010 18:53:00  Office Staff   S.O. News Service

ಬೆಂಗಳೂರು,ಏ,೧೩: ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವರ್ಗಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

 

ಗ್ರಾಮ ಪಂಚಾಯತ್‌ನ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮೇ ೧೮ ಕ್ಕೆ ಮುಗಿಯಲಿದ್ದು, ಆ ನಂತರ ವರ್ಗಾವರ್ಗಿ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

 

ಸರ್ಕಾರಿ ನೌಕರರ ವರ್ಗಾವಣೆ ಕುರಿತ ನಿಯಮಾವಳಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರೂಪಿಸಿದ್ದು, ಈ ಕುರಿತಾದ ಕಡತಕ್ಕೆ ಮುಖ್ಯಮಂತ್ರಿಯವರ ಅನುಮೋದನೆ ಮಾತ್ರ ಬಾಕಿಯಿದೆ.

 

 

ವರ್ಗಾವಣೆ ನಡೆಸಲು ಸರ್ಕಾರ ಈ ಬಾರಿ ಹೆಚ್ಚಿನ ಕಾಲಾವಧಿಯನ್ನು ನಿಗದಿಪಡಿಸಲಿದ್ದು, ನಿಗದಿತ ಸಮಯದಲ್ಲಿ ಸಾಮೂಹಿಕ ವರ್ಗಾವರ್ಗಿ ಪ್ರಕ್ರಿಯೆ ಮುಗಿಸಲು ನಿರ್ಧರಿಸಲಾಗಿದೆ. ಬಹುತೇಕ ಜೂನ್ ಅಂತ್ಯದ ವರೆಗೆ ವರ್ಗಾವಣೆ ನಡೆಯುವ ಸಾಧ್ಯತೆಯಿದೆ.

 

 

ಒಟ್ಟಾರೆ ಸರ್ಕಾರಿ ನೌಕರರ ಪೈಕಿ ಶೇ ೫ ರಷ್ಟು ಮೀರದಂತೆ ವರ್ಗಾವಣೆ ನಡೆಸಲು ಹೊಸ ನಿಯಮಾವಳಿಯಂತೆ ಅವಕಾಶವಿದ್ದು, ಈ ಬಾರಿ ವರ್ಗಾವಣೆ ನಡೆಸುವ ಅಧಿಕಾರವನ್ನು ಮಂತ್ರಿಗಳಿಗೆ ನೀಡಲಾಗುತ್ತಿದೆ. ಮಂತ್ರಿಗಳು ಅನುಮೋದನೆಯ ನಂತರ ವರ್ಗಾವಣೆ ನಡೆಯಲಿದೆ.

 

 

ಇದೀಗ ವರ್ಗಾವಣೆ ನಡೆಸಲು ಗ್ರಾಮ ಪಂಚಾಯತ್ ಚುನಾವಣೆ ಅಡ್ಡಿಯಾಗಿ ಪರಿಣಮಿಸಿದ್ದು, ಚುನಾವಣೆಯ ನಂತರ ವರ್ಗಾವಣೆಯ ಸುಗ್ಗಿ ಆರಂಭವಾಗಲಿದೆ ಎಂದು ಇದೇ ಮೂಲಗಳು ಹೇಳಿವೆ. 

 


Share: